ದಿನಕರಭಟ್ಟ
ಕಾಲ 16ನೆಯ ಶತಮಾನ ಖಗೋಳಶಾಸ್ತ್ರಜ್ಞ. ಬ್ರಹ್ಮಮತೀ ತೀರದಲ್ಲಿನ ಬಾರೇಜ್ಯ ಗ್ರಾಮದ ಮೋಢ ಎಂಬ ಬ್ರಾಹ್ಮಣ ಮನೆತನಕ್ಕೆ ಸೇರಿದ ಈತ e್ಞÁವಾರ ಎಂಬ ಗ್ರಾಮದ ನಿವಾಸಿ. ಕೌಶಿಕ ಗೋತ್ರದ ದುಂಡ ಈತನ ಮುತ್ತಾತ. ಈತ ಲಘುಖೇಟಸಿದ್ಧಿ, ಚಾಂದ್ರಾರ್ಕೀ ಸೂತ್ರ ಮತ್ತು ಅದರ ವ್ಯಾಖ್ಯಾನ, ಗ್ರಹಲಾಘವಟೀಕಾ ಮತ್ತು ಚಂದ್ರೋನ್ಮೀಲನ _ ಎಂಬ ಗ್ರಂಥಗಳನ್ನು ಬರೆದಿದ್ದಾನೆ.

ಲಘುಖೇಟಸಿದ್ಧಿಯಲ್ಲಿ ಗ್ರಹಗಳ ಚಲನೆಗಳಿಗೆ ಸಂಬಂಧಿಸಿದ ಲೆಕ್ಕಚಾರಗಳನ್ನು 1500 ಶತವರ್ಷವನ್ನಾಗಿರಿಸಿಕೊಂಡು ನಿರೂಪಿಸಲಾಗಿದೆ.  ಚಂದ್ರಾರ್ಕೀ ಸೂತ್ರದಲ್ಲಿ ಸೂರ್ಯ ಮತ್ತು ಚಂದ್ರನ ಸ್ಥಾನಗಳನ್ನು ಗೊತ್ತುಮಾಡಲು ಸಹಾಯವಾಗುವ ಕೋಷ್ಠಕಗಳನ್ನೂ ತಿಥಿ, ವಾರ ಮತ್ತು ಯೋಗಗಳನ್ನೂ ಗೊತ್ತುಮಾಡಲು ಅವಶ್ಯಕವಾದ ವಿವರಗಳು ನಿರೂಪಿತವಾಗಿವೆ. ಇದರ ವಾಖ್ಯಾನದಲ್ಲಿ ಉಚಿತವಾದ ಉದಾಹರಣೆಗಳನ್ನು ಕೊಡಲಾಗಿದೆ.  ಗ್ರಹಲಾಘವಟೀಕಾ ಎಂಬುದು ನಂದಿಗ್ರಾಮದ (ಮುಂಬಯಿಗೆ ಸಮೀಪದಲ್ಲಿ 64 ಕಿಮೀ ದಕ್ಷಿಣಕ್ಕೆ ಸಮುದ್ರದಿಂದ ಅಂಚಿನಲ್ಲಿರುವ ಈಗಿನ ನಂದಗೋನ) ನಿವಾಸಿಯಾದ ಪ್ರಸಿದ್ಧ ಖಗೋಳಜ್ಞನಾದ ಗಣೇಶದೈವಜ್ಞನ ಗ್ರಂಥದ ಟೀಕೆಯಾಗಿದೆ.
(ಕೆ.ವಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ